== 5 ರಾಜ್ಯಗಳ ವಿಧಾನಸಭಾ ಚುನಾವಣೆ == 2017ರಲ್ಲಿ ಭಾರತದ 5 ರಾಜ್ಯಗಳಾದ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಫೆಬ್ರವರಿ 4 ರಿಂದ ಮಾರ್ಚ್ 11ರ ತನಕ ಚುನಾವಣೆ ನಡೆಯಲಿದೆ. ಜನವರಿ 04 ರಂದು ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ 4-1-2017.ಬುಧವಾರ ಪ್ರಕಟಿಸಿದೆ. ಈ 5 ರಾಜ್ಯಗಳ ಶಾಸಕಾಂಗ ಅಸೆಂಬ್ಲಿಗಳ ಅವಧಿ -ಗೋವಾ 18 ಮಾರ್ಚ್, 2017; ಮಣಿಪುರ: 18 ಮಾರ್ಚ್, 2017; ಪಂಜಾಬ್: 18 ಮಾರ್ಚ್, 2017; ಉತ್ತರಾಖಂಡ್: 26 ಮಾರ್ಚ್, 2017; ಯುಪಿ: 27 ಮೇ, 2017; ರಂದು ಮುಕ್ತಾಯಗೊಳ್ಳುತ್ತದೆ. == ವಿವರ == 2017ರಲ್ಲಿ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಫೆಬ್ರವರಿ 4 ರಿಂದ ಮಾರ್ಚ್ 11ರ ತನಕ ಚುನಾವಣೆ ಪರ್ವ ನಡೆಯಲಿದೆ. ಚುನಾವಣೆ ಎದುರಿಸಲಿರುವ ಐದು ರಾಜ್ಯಗಳಲ್ಲಿ 2017 ಜನವರಿ 04ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. 5 ರಾಜ್ಯಗಳಿಂದ ಸುಮಾರು 16 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. 690 ವಿಧಾನಸಭಾ ಸ್ಥಾನಗಳಿವೆ. * ಖರ್ಚು ವೆಚ್ಚ ಮಿತಿ: ಉತ್ತರಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡ್ ನ ಅಭ್ಯರ್ಥಿಗಳಿಗೆ 28 ಲಕ್ಷ ರು ಹಾಗೂ ಗೋವಾ ಮತ್ತು ಮಣಿಪುರದ ಅಭ್ಯರ್ಥಿಗಳಿಗೆ 20 ಲಕ್ಷ ರು. * 5 ರಾಜ್ಯಗಳಲ್ಲಿ ಸುಮಾರು 1.85 ಲಕ್ಷ ಮತದಾನ ಕೇಂದ್ರಗಳ ಸ್ಥಾಪನೆ. === ಗೋವಾ === ಗೋವಾ ವಿಧಾನಸಭೆ ಫೆಬ್ರವರಿ 4 (ಶನಿವಾರ)ರಂದು ಒಂದೇ ಹಂತದಲ್ಲಿ ಮತದಾನ. ಒಟ್ಟು 40 ಅಸೆಂಬ್ಲಿ ಕ್ಷೇತ್ರ ಈಗಿನ ಅಸೆಂಬ್ಲಿ ಬಲಾಬಲ: ಬಿಜೆಪಿ (21), ಐಎನ್ ಸಿ(9), ಎಂಎಜಿ(3). ಇತರೆ (5) ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ) ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ದಿ.4 , 2017 ಶನಿವಾರ ಒಂದೇ ಹಂತದಲ್ಲಿ ಮತದಾನ ನಡೆಯಿತು. ಗೋವಾದಲ್ಲಿ ದಾಖಲೆಯ ಶೇ 83 ಮತದಾನವಾಗಿದೆ. ಗೋವಾದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದರೆ, ಪಂಜಾಬ್‌ನ ಹಲವೆಡೆ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದೆ. === ಪಂಜಾಬ್ === ಒಂದೇ ಹಂತದಲ್ಲಿ ಫೆಬ್ರವರಿ 4ರಂದು (ಶನಿವಾರ) ಮತದಾನ. ಒಟ್ಟು 117 ಅಸೆಂಬ್ಲಿ ಕ್ಷೇತ್ರ ಈಗಿನ ಅಸೆಂಬ್ಲಿ ಬಲಾಬಲ: ಅಕಾಲಿ ದಳ(56), ಬಿಜೆಪಿ (12), ಕಾಂಗ್ರೆಸ್ (46), ಇತರೆ (3) ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ) ಪಂಜಾಬ್‌ನ 117 ದಿ.4 , 2017 ಶನಿವಾರ ಒಂದೇ ಹಂತದಲ್ಲಿ ಮತದಾನ ನಡೆಯಿತು. ಪಂಜಾಬ್‌ನಲ್ಲಿ ಶೇ 75ರಷ್ಟು ಮತದಾನವಾಗಿದೆ. === ಉತ್ತರಾಖಂಡ === ಉತ್ತರಾಖಂಡ ವಿಧಾನಸಭೆ ಉತ್ತರಾಖಂಡದಲ್ಲಿ ಚುನಾವಣೆಗಳು ಫೆಬ್ರವರಿ 15(ಬುಧವಾರ)ರಂದು ಮತದಾನ. +70 ಅಸೆಂಬ್ಲಿ ಕ್ಷೇತ್ರ. ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (32), ಬಿಜೆಪಿ (31), ಬಿಎಸ್ ಪಿ(3), ಯುಕೆಡಿ (1), ಇತರೆ (3) ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ) ವಿಧಾನಸಭಾ ಚುನಾವಣೆ: ಉತ್ತರಾಖಂಡ್ ಚುನಾವಣೆಯಲ್ಲಿ ದಾಖಲೆಯ ಮತದಾನ 68% === ಮಣಿಪುರ === ಮಣಿಪುರ ವಿಧಾನಸಭೆ ಎರಡು ಹಂತದಲ್ಲಿ ಮತದಾನ, ಮಾರ್ಚ್ 4 ಹಾಗೂ ಮಾರ್ಚ್ 8. ಮೊದಲ ಹಂತದಲ್ಲಿ 38 ಕ್ಷೇತ್ರ, ಎರಡನೇ ಹಂತದಲ್ಲಿ 22 ಕ್ಷೇತ್ರ ಒಟ್ಟು 60 ಅಸೆಂಬ್ಲಿ ಕ್ಷೇತ್ರ ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (42), ಟಿಎಂಸಿ (7), ಮಣಿಪುರ ಸ್ಟೇಟ್ ಕಾಂಗ್ರೆಸ್ (5) ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ) === ಉತ್ತರಪ್ರದೇಶ === ಉತ್ತರಪ್ರದೇಶ ವಿಧಾನಸಭೆ ಉತ್ತರಪ್ರದೇಶದಲ್ಲಿ 7 ಹಂತದಲ್ಲಿ ಮತದಾನ. ಒಟ್ಟು 403 ಅಸೆಂಬ್ಲಿ ಕ್ಷೇತ್ರ ಮೊದಲ ಹಂತ: ಫೆಬ್ರವರಿ 11 ಎರಡನೇ ಹಂತ : ಫೆಬ್ರವರಿ 15 ಮೂರನೇ ಹಂತ : ಫೆಬ್ರವರಿ 19 ನಾಲ್ಕನೇ ಹಂತ: ಫೆಬ್ರವರಿ 23 ಐದನೇ ಹಂತ: ಫೆಬ್ರವರಿ 27 ಆರನೇ ಹಂತ : ಮಾರ್ಚ್ 04 ಏಳನೇ ಹಂತ: ಮಾರ್ಚ್ 08 ಈಗಿನ ಅಸೆಂಬ್ಲಿ ಬಲಾಬಲ: ಎಸ್ಪಿ (224), ಬಿಎಸ್ಪಿ (80), ಬಿಜೆಪಿ (47), ಐಎನ್ ಸಿ(28), ಆರ್ ಎಲ್ ಡಿ (9) ಮಾರ್ಚ್ 11 ರಂದು ಶನಿವಾರ ಫಲಿತಾಂಶ ಪ್ರಕಟ. == ಚುನಾವಣೆಯ ಮುಖ್ಯ ನಿಯಮಾವಳಿಗಳು == * • ಎಲ್ಲಾ 5 ರಾಜ್ಯಗಳಲ್ಲಿ ಒಂದೇ ಬಾರಿ ಮತದಾನ ನಡೆಯಲಿದೆ • ಆಯೋಗದ ನಿಷ್ಪಕ್ಷವಾದ ಚುನಾವಣೆ ನಡೆಸುವುದೆಂದು ಖಚಿತಪಡಿಸುವುದು • ಆಯೋಗ ಮತದಾರರ ಅಭ್ಯರ್ಥಿಗಳ ರಾಜಕೀಯ ಪಕ್ಷಗಳ ಅನುಕೂಲಕ್ಕಾಗಿ ಐಟಿ ಅರ್ಜಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಹೊರಡಿಸಿದೆದೆ • ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ತಮ್ಮ ಸಾಮಾಜಿಕ ಮಾಧ್ಯಮವನ್ನು ನೋಂದಣಿ ಮಾಡಬೇಕು ರಾಜಕೀಯ ಪಕ್ಷಗಳು ಫಲಿತಾಂಶ ಪ್ರಕಟವಾದ 30 ದಿನಗಳ ಒಳಗೆ ಅಭ್ಯರ್ಥಿಗಳ ಖರ್ಚು ವಿವರ ಹೇಳಿಕೆಗಳನ್ನು ಸಲ್ಲಿಸುವ /ಘೋಷಣೆಯ ಅಗತ್ಯವಿದೆ * • ಕಪ್ಪು ಹಣ ನಿಗ್ರಹಿಸಲು ಕಠಿಣ ವೆಚ್ಚ ಮಾನಿಟರ್ ವ್ಯವಸ್ಥೆ ಇರುತ್ತದೆ • ಪ್ರತ್ಯೇಕ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚ ಮಿತಿಯು ಯುಪಿ, ಪಂಜಾಬ್ ಹಾಗೂ ಉತ್ತರಾಖಂಡಗಳಲ್ಲಿ ರೂ 28 ಲಕ್ಷ ಆಗಿದೆ ; ಮಣಿಪುರ ಮತ್ತು ಗೋವಾ ಗಳಿಗೆ ರೂ 20 ಲಕ್ಷ • ನೀತಿ ಸಂಹಿತೆ ತಕ್ಷಣ 5 ರಾಜ್ಯಗಳಲ್ಲಿ ಜಾರಿಗೆ ಬರುತ್ತದೆ • ಅಭ್ಯರ್ಥಿಗಳು ನಾಮಪತ್ರಕ್ಕೆ ಫೋಟೋ ಲಗತ್ತಿಸುವ ಅಗತ್ಯವಿದೆ • ಅಫಿಡವಿಟ್ ದಾಖಲಿಸುವಾಗ ಜೊತೆಗೆ, ಅಭ್ಯರ್ಥಿಗಳು ಯಾವುದೇ ವಿದ್ಯುತ್, ನೀರು ಸಂಸ್ಥೆಗಳ ಬೇ-ಬಕಿ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿದೆ; ಅದು ಹೆಚ್ಚುವರಿ ಅಫಿಡವಿಟ್ ಆಗಿದೆ. • ಅಂಚೆ ಮತಪತ್ರಗಳನ್ನು ಕೆಲವು ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಮೂಲಕ ವರ್ಗಾಯಿಸಬಹುದು • ವಿದ್ಯುನ್ಮಾನ ಮತಯಂತ್ರಗಳ ಮತಪತ್ರಗಳ ಮೇಲೆ ಅಭ್ಯರ್ಥಿಗಳ ಫೋಟೋ ಇರುತ್ತದೆ • ಗೋವಾ ಗಿಗಿಂಖಿ ಕೂಡಿದ್ದರೆ ನಡೆಯಲಿದೆ. ಯಾವುದೇ. ಗಿಗಿಂಖಿ ಚುನಾವಣಾ ಕ್ಷೇತ್ರಗಳನ್ನು ಮತ್ತಷ್ಟು ಹೆಚ್ಚಾಗುತ್ತದೆ • ವಿದ್ಯುನ್ಮಾನ ಮತಯಂತ್ರಗಳ ಎಲ್ಲಾ ರಾಜ್ಯಗಳಲ್ಲಿ ಬಳಸಲಾಗುತ್ತದೆ • ಸ್ಥಳಗಳಲ್ಲಿ ಮಹಿಳೆಯರು ಪುರುಷರು "ಒಟ್ಟಿಗೆ ಸೇರಿಕೊಳ್ಳದ ಕಡೆ ಪ್ರತ್ಯೇಕ ಮತದಾನ ಕೇಂದ್ರಗಳು ಇರುವುವು: (ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ) • ರಹಸ್ಯ ಮತದಾನ ವಿಭಾಗದ ಎತ್ತರ, 30 ಇಂಚಿನ ಎತ್ತರ ಮಾಡಲಾಗಿದೆ • ಪ್ರತಿ ಮತದಾನ ಕಟ್ಟೆ ಸ್ಥಳದ ಹೊರಗೆ, ಮತದಾರನ ನೆರವು ಮತಗಟ್ಟೆ ಇರುತ್ತದೆ • ್ಟ ಒಟ್ಟು 1,85,000 ಮತದಾನ ಕೇಂದ್ರಗಳಿಗೆ ಕಾರ್ಯಾಚರಣೆಗಳ ಸುರಕ್ಷಿತವಾಗಿರಲು ವ್ಯವಸ್ಥೆ ಇರುವುದು. • ಫೋಟೋ ಮತದಾರ ಸ್ಲಿಪ್ ಜೊತೆಗೆ, ಬಣ್ಣ ಬಣ್ಣದ ಮತದಾರ ಮಾರ್ಗದರ್ಶಿಯನ್ನು ಪ್ರತಿ ಕುಟುಂಬಕ್ಕೆ ಹಂಚಲಾಗುತ್ತದೆ • ಒಟ್ಟು 16 ಕೋಟಿ ಮತದಾರರು ಭಾಗವಹಿಸುವರು • ಚುನಾವಣೆ 690 ಶಾಸಕ ಸಭೆ ಸ್ಥಾನಗಳಳ್ಲಿ ನಡೆಯುತ್ತವೆ ಪ್ರಮುಖ ವಿಷಯ: ಧರ್ಮದ ಹೆಸರಿನಲ್ಲಿ ಮತಗಳನ್ನು ಕೋರುವುದು ಭ್ರಷ್ಟತೆ ಎಂದು ಭಾವಿಸಲಾಗುವುದು. (ಎಂದು: ಸಿಇಸಿ) *ಎಣಿಕೆ ಮಾರ್ಚ್ 11 ರಂದು ನಡೆಯಲಿದೆ == ಚುನಾವಣೆ ಮುನ್ನೋಟ == 10, 2017 === ಯು.ಪಿ ಚುನಾವಣೆ ಮುನ್ನೋಟ: (403 ಸ್ಥಾನ/202) === === ಚುನಾವಣೆ ಮುನ್ನೋಟ:ಪಂಜಾಬು 117 ಸ್ಥಾನಗಳು/59 === === ಚುನಾವಣೆ ಮುನ್ನೋಟ:ಗೋವ 41 ಸ್ಥಾನಗಳು/21 === === ಚುನಾವಣೆ ಮುನ್ನೋಟ:ಉತ್ತರಾಖಂಡ್:ಸ್ಥಾನಗಳು:70/36 === === ಚುನಾವಣೆ ಮುನ್ನೋಟ:ಮಣಿಪುರ:60/31 === === ಫಲಿತಾಂಶಗಳು === == ನೋಡಿ == ಭಾರತದಲ್ಲಿ ವಿಧಾನಸಭೆ ಚುನಾವಣೆಗಳು ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ ಉತ್ತರಪ್ರದೇಶ ವಿಧಾನಸಭೆ, ಪಂಜಾಬ್ ವಿಧಾನಸಭೆ, ಗೋವಾ ವಿಧಾನಸಭೆ, ಉತ್ತರಾಖಂಡ ವಿಧಾನಸಭೆ ಮತ್ತು ಮಣಿಪುರ ವಿಧಾನಸಭೆ == ಹೆಚ್ಚಿನ ಮಾಹಿತಿ == ಜನಾದೇಶಕ್ಕೆ ಪಂಚ ರಾಜ್ಯ ಅಣಿ;ಪಿಟಿಐ;5 , 2017 == ಉಲ್ಲೇಖ ==